ಪರಿಷಂಚಾಮೇ - ಭೋಜನ ಮಂತ್ರ :-
ಎಲೆ ಹಾಕುವುದಕ್ಕಿಂತ ಮೊದಲು ನಾವು ಚೌಕಾಕಾರದ ಮಂಡಲವನ್ನು ಎಡಗೈಯಿಂದ ಮಾಡಿಕೊಳ್ಳಬೇಕು ಅದರಲ್ಲಿ "ಶ್ರೀ" ಕಾರವನ್ನು ಬರೀಬೇಕು ನಂತರ ಎಲೆಯನ್ನು ಹಾಕಿಕೊಳ್ಳಬೇಕು. ಅನ್ನದ ಮೇಲೆ ಅಭಿಗಾರವನ್ನ ಮಾಡಿದ ನಂತರ (ಅನ್ನದ ಮೇಲೆ ತೊವ್ವೆ ಹಾಕಿದ ನಂತರ )
ಪ್ರೋಕ್ಷಣೆ. :
(ಅನ್ನಕ್ಕೆ ನೀರನ್ನು ಚಿಮುಕಿಸುವುದು)
ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ| ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಇತಿ ಪ್ರೋಕ್ಷ್ಯ||
ಎಲೆಯ ಸುತ್ತಲೂ ಪ್ರದಕ್ಷಿಣಾಕಾರವಾಗಿ ನೀರನ್ನು ಹಾಕಬೇಕು
(ಹಗಲಿನಲ್ಲಿ) : ಸತ್ಯಂ ತ್ವರ್ತೇನ ಪರಿಷಿಂಚಾಮಿ
(ರಾತ್ರಿ) : ಋತಂ ತ್ವಾ ಸತ್ಯೇನ ಪರಿಷಿಂಚಾಮಿ
ಚಿತ್ರಾಹುತಿಃ :
(ಬಲಗಡೆ ನೀರಿನಿಂದ ಕೆಳಗಡೆಯಿಂದ ಮೇಲೆ ಒಂದು ಗೆರೆ ಹಾಕಿ - ಸ್ವಲ್ಪ ಸ್ವಲ್ಪ ಅನ್ನದಿಂದ ಆಹುತಿಗಳನ್ನು ಇಡಬೇಕು. ರಾತ್ರಿ ಕಾಲದಲ್ಲಿ ಚಿತ್ರಾಹುತಿಯನ್ನು ಇಡಬೇಕಾಗಿಲ್ಲ )
ಚಿತ್ರಾಯ ನಮಃ: |
ಚಿತ್ರಗುಪ್ತಾಯ ನಮಃ: !
ಯಮಾಯ ನಮಃ!
ಯಮಧರ್ಮಾಯ ನಮಃ
ಸರ್ವಭೂತೇಭ್ಯೋ ನಮಃ!
ಆಪೋಷಣ
( 1. ಎಡಭಾಗದಲ್ಲಿ ಎರಡು ಬಿಂದು ನೀರುಗಳನ್ನು ಇಟ್ಟುಕೊಳ್ಳಬೇಕು ಇಟ್ಕೊಂಡು)
( 2. ಕೈಯಲ್ಲಿ ತೀರ್ಥವನ್ನು ಹಾಕಿಕೊಂಡು - ಎಡಕೈ ಮಧ್ಯದ ಬೆರಳಿನಿಂದ ಎಲೆ ಮುಟ್ಟಿ - ಕುಡಿಯುವುದು )
ಅಮೃತೋಪಸ್ತರಣಮಸಿ ಸ್ವಾಹಾ
( ಐದು ಆಹುತಿಗಳನ್ನು (ಅನ್ನ) ತಗೊಳ್ಳಬೇಕು ಪೂರ್ವದಿಂದ ಒಂದು ದಕ್ಷಿಣದಿಂದ, ಪಶ್ಚಿಮದಿಂದ, ಉತ್ತರದಿಂದ, ಮಧ್ಯದಿಂದ ಇಂದ ಒಂದು ಆಹುತಿಗಳ )
ಓಂ ಪ್ರಾಣಾಯ ಸ್ವಾಹಾ |
ಓಂ ಅಪಾನಾಯ ಸ್ವಾಹಾ |
ಓಂ ವ್ಯಾನಾಯ ಸ್ವಾಹಾ |
ಓಂ ಉದಾನಾಯ ಸ್ವಾಹಾ |
ಓಂ ಸಮಾನಾಯ ಸ್ವಾಹಾ |
ಓಂ ಬ್ರಹ್ಮಣೇ ಸ್ವಾಹಾ
ಆಹುತಿಯನ್ನು ಸ್ವೀಕಾರ ಮಾಡಿದ ಮೇಲೆ ಎಡಕೈ ಮಧ್ಯದ ಬೆರಳನ್ನು ಈ ಎರಡು ನೀರಿನ ಬಿಂದುಗಳು ಇರುತ್ತಲ್ಲ ಅದ್ದುಕೊಂಡು ಕಣ್ಣಿಗೆ ಒತ್ತುಕೊಳ್ಳುವುದು.....
ಉತ್ತರಾಪೋಶನಮ್ :
(ಭೋಜನದ ನಂತರ ಕೈ ಯಲ್ಲಿ ನೀರನ್ನು ಹಾಕಿಕೊಂಡು)
ಅಮೃತಾಪಿಧಾನಮಸಿ ಸ್ವಾಹಾ
ರೌರವೇ ಅಪುಣ್ಮನಿಲಯೇ ಪದ್ಮಾರ್ಬುದನಿವಾಸಿನಾಮ್ | ಅರ್ಥಿನಾಮುದಕಂ ದತ್ತಮಕ್ಷಯ್ಯಮ್ ಉಪತಿಷ್ಮತು ||